ಖ್ಯಾತ ಗಾಯಕಿ ಪಿ.ಸುಶೀಲಾ ಅವರ ಸಾವಿನ ಸುದ್ದಿ ಶುದ್ಧ ಸುಳ್ಳು | Filmibeat Kannada

2017-11-03 327

ಖ್ಯಾತ ಗಾಯಕಿ ಪಿ.ಸುಶೀಲಾ (81) ಅವರು ಗುರುವಾರ ರಾತ್ರಿ ನಿಧನರಾಗಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿತ್ತು. ಇದರಿಂದ ಅಭಿಮಾನಿಗಳು ಹಾಗೂ ಅವರ ಮನೆಯವರು ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದರು. ಆದ್ರೆ, ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದಂತೆ ಸುಶೀಲಾ ಅವರಿಗೆ ಏನೂ ಆಗಿಲ್ಲ. ಅವರು ಆರೋಗ್ಯವಾಗಿ ಮತ್ತು ಕ್ಷೇಮವಾಗಿದ್ದಾರೆ...ಈ ಬಗ್ಗೆ ಸ್ವತಃ ಸುಶೀಲಾ ಅವರೇ ಸ್ಪಷ್ಟನೆ ನೀಡಿದ್ದು, ವಿಡಿಯೋವೊಂದನ್ನ ಬಿಡುಗಡೆ ಮಾಡಿದ್ದಾರೆ. ಸದ್ಯ, ವಿದೇಶದಲ್ಲಿರುವ ಅವರು ''ನನ್ನ ಬಗ್ಗೆ ಹರಿದಾಡುತ್ತಿರುವ ವದಂತಿಗಳನ್ನ ನಂಬಬೇಡಿ. ನಾನು ಅಮೇರಿಕಾಗೆ ಬಂದಿದ್ದೇನೆ. ನಾನು ಆರೋಗ್ಯವಾಗಿದ್ದೇನೆ. ನಾಳೆ ಭಾರತಕ್ಕೆ ವಾಪಸ್ ಬರುತ್ತಿದ್ದೇನೆ'' ಎಂದು ತಿಳಿಸಿದ್ದಾರೆ...ಪಿ.ಸುಶೀಲಾ ಅವರು ಭಾರತದ ವಿವಿಧ ಭಾಷೆಗಳಲ್ಲಿ ಅತಿ ಹೆಚ್ಚು ಹಾಡುಗಳನ್ನ ಹಾಡಿದ್ದು, ಗಿನ್ನಿಸ್ ದಾಖಲೆ ಮತ್ತು ಏಷ್ಯಾ ಬುಕ್ ದಾಖಲೆ ಮಾಡಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ, ಸೇರಿದಂತೆ ಹಲವು ಭಾಷೆಗಳಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಹಾಡುಗಳನ್ನ ಹಾಡಿರುವ ಪಿ ಸುಶೀಲಾ ಅವರು 6 ದಶಕಗಳಿಂದ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ...

Videos similaires